ಗೊರಸಿಗಳು

	ಮ್ಯಾಮೇಲಿಯ ವರ್ಗದ ಅಂಗ್ಯುಲೇಟ ಆಧಿಗಣಕ್ಕೆ ಸೇರಿದ ಹಲವಾರು ಬಗೆಯ ಜರಾಯುಜ ಮತ್ತು ಸಸ್ಯಾಹಾರಿ ಸಸ್ತನಿಗಳು. ಇವೆಲ್ಲವುಗಳಲ್ಲೂ ಕಾಲಿನಲ್ಲಿ ಗೊರಸು (ನೋಡಿ- ಗೊರಸು) ಇರುವುದರಿಂದ ಈ ಹೆಸರು ಬಂದಿದೆ. ತಮ್ಮ ರೂಪ ರಚನೆ ಮತ್ತು ಸ್ವಭಾವಗಳಲ್ಲಿ ವೈವಿಧ್ಯವನ್ನು ಪ್ರದರ್ಶಿಸುವ ಇವನ್ನು ಬೇರೆ ಬೇರೆ ಗಣಗಳಲ್ಲಿ ಸೇರಿಸಲಾಗಿದೆ. ಕುದುರೆ, ಕತ್ತೆ, ದನ, ಕುರಿ, ಜಿಂಕೆ, ಆನೆ, ಖಡ್ಗಮೃಗ, ಹಂದಿ, ನೀರು ಕುದುರೆ, ಕೋನೆ (ಹೈರ್ಯಾಕ್ಸ್) ಟಿಪಿರ್, ಮುಂತಾದವು ಗೊರಸಿನ ಕೆಲವು ಉದಾಹರಣೆಗಳು. ಇವಲ್ಲದೆ ಇಯೋಸೀನ್, ಆಲಿಗೋಸೀನ್ ಮತ್ತು ಪ್ಲೀಸ್ಟೊಸೀನ್ ಕಾಲಗಳಲ್ಲಿ ಜೀವಂತವಾಗಿದ್ದು ಈಗ ಬರಿಯ ಫಾಸಿಲುಗಳ ರೂಪದಲ್ಲಿ ಮಾತ್ರ ಕಾಣದೊರೆಯುವ ಅನೇಕ ಪ್ರಭೇದಗಳೂ ಗೋರಸಿಗಳ ಗುಂಪಿನಲ್ಲಿವೆ., ಪ್ರಸಕ್ತ ಲೇಖನದಲ್ಲಿ ಗೊರಸಿಗಳ ಮುಖ್ಯ ಲಕ್ಷಣಗಳನ್ನೂ ಸ್ಥೂಲ ವರ್ಗಿಕರಣವನ್ನೂ ಸಂಕ್ಷೇಪವಾಗಿ ಕೊಡಲಾಗಿದೆ. 
ಗೊರಸಿಗಳ ಲಕ್ಷಣಗಳು: ಗೊರಸಿಗಳು ಪೇಲಿಯೋಸೀನ್ ಯುಗದಿಂದೀಚೆಗೆ ಮಾತ್ರ ಕಾಣದೊರೆಯುತ್ತವೆ. ಈ ಕಾಲಕ್ಕಿಂತ ಮುಂಚೆ ಜೀವಿಸಿದ್ದ ಪ್ರಾಣಿಗಳೆಲ್ಲವೂ ಕೀಟಹಾರಿಗಳಾಗಿದ್ದು ಸಣ್ಣ ಗಾತ್ರದವಾಗಿದ್ದವು. ಅನಂತರ ಇವುಗಳ ಆಹಾರ ಸೇವನೆಯ ಕ್ರಮದಲ್ಲಿ ಕೆಲವು ಮೂಲಭೂತ ಬದಲಾವಣೆಗಳು ಉಂಟಾಗಿ ಇವುಗಳಲ್ಲಿ ಬಹುಪಾಲು ಪ್ರಾಣಿಗಳು ಸಸ್ಯಾಹಾರದ ಸೇವನೆಗೆ ಮೊದಲಾದವು, ಬಹುಶಃ ಈ ಬದಲಾವಣೆಯಿಂದಾಗಿ ಪ್ರಾಣಿಗಳ ಗಾತ್ರ (ಕೆಲವು ಪ್ರಾಣಿಗಳನ್ನುಳಿದು ಉದಾ: ಕೋನಿಗಳು) ಹೆಚ್ಚುತ್ತಾ ಬಂತು. ಹೀಗಾಗಿ ಗೊರಸಿ ದೊಡ್ಡ ಗಾತ್ರದ ಪ್ರಾಣಿಗಳಾಗಿವೆ. ಇವುಗಳ ಧರ್ಮ  ದಪ್ಪ ಮತ್ತು ಹಲವಾರು ಬಗೆಯ ಮಚ್ಚೆಗಳಿಂದ ಕೂಡಿದ್ದು ವರ್ಣಮಯವಾಗಿರುತ್ತವೆ. ಕೊಬ್ಬು ಕೋರೆ ಮುಂತಾದ ರಕ್ಷಣೆಯ ಸಾಧನೆಗಳಾದ್ದರೂ ಗೊರಸಿಗಳು ತಮ್ಮ ರಕ್ಷಣೆಗೆ ಈ ಸಾಧನೆಗಳಿಗಿಂತ ಹೆಚ್ಚಾಗಿ ವೇಗದ ನಡಿಗೆಯನ್ನು ಅವಲಂಬಿಸಿವೆ. ಚುರುಕಿನ ನಡೆಯು ಅತ್ಯಂತ ವೇಗದಾಗಿದೆ. ಕಾಲುಗಳು ತುದಿಬೆರಳಿನ ಮೇಲೆ ನಿಲ್ಲುವಂತಾಗಿ ಅವುಗಳೂ ಉದ್ದವೂ ಹೆಚ್ಚಿದೆ. ಇದರಿಂದಾಗಿ ಕಾಲಿನ ಐದು ಬೆರಳುಗಳಲ್ಲಿ  ಆಚೀಚಿನವು ಭೂಮಿಯನ್ನು ತಲುಪುತ್ತವೆ. ಹೋಗುವುದರಿಂದ ಕ್ಷೀಣಗೊಂಡಿವೆ. ಕೊನೆಯ ಕಾಲಿನಲ್ಲಿ ಬರಿ ಒಂದೇ ಇವೆ. ಎರಡು ಮಧ್ಯದ ಬೆರಳುಗಳು ಮಾತ್ರ ಉಳಿದಿವೆ. ಕಾಲಿನ ಚಲನೆಯ ರೀತಿಯಲ್ಲೂ ಕೆಲವು ಹಿಂದಿನ ಮುಂದಿನ ಚಲನೆ ಮಾತ್ರ ಸೀಮಿತವಾಗಿದೆ. ಕೀಲುಗಳು ರಾಟೆಯ ಮಾದರಿಯಾಗಿದ್ದವು. ಅಲ್ಪ ಮತ್ತು ಫೀಬೋಲಂ ಮೂಳೆಗಳು ಕ್ಷೀಣವಾಗಿತ್ತು. ಬಂದು ರೇಡಿಯಸ್ ಹಾಗೂ ಟಿಬಿಯಗಳೊಂದಿಗೆ ಕೂಡಿಕೊಂಡು ಬಿಟ್ಟಿವೆ ಮಧ್ಯದ ಬೆರಳಿನ ತುದಿಯಲ್ಲಿ ಎಲುಬುಗಳು ಅಗಲವಾಗಿದೆಯಲ್ಲದೆ ಇದರ ಕೊಂಡಿ ಯುಗುರು (ಕ್ಲಾ) ಮಾರ್ಪಾಟಿಗಾಗಿ ಎಲುಬಿನ ಸುತ್ತ ಗೊರಸಾಗಿ ಬೆಳೆದಿದೆ. ಕಾಲುಗಳು ಹೀಗೆ ಉದ್ದದಲ್ಲಿ ಹೆಚ್ಚಿದ್ದರೂ ಈ ಹೆಚ್ಚುಗಳ ಕಾಲಿನ ಕೆಳಭಾಗದಲ್ಲಿ ಮಾತ್ರ ಕಂಡು ಬರುತ್ತದೆ. ಹ್ಯೂಮರಸ್ ಮತ್ತು ಫೀಮರ್ ಮೂಳೆಗಳು ಮಾತ್ರ ಮೋಟಾಗಿಯೇ ಇವೆ. ಹಿಂಗಾಲುಗಳು ದೇಹದ ಮುನ್ನಡೆಗೆ ಸಹಾಯಕವಾಗಿದೆ. ಸಾಧನೆಗಳಾಗಿಯೂ ಮುಂಗಾಲುಗಳು ದೇಹದ  ಭಾರವನ್ನು ಹೊರುವ ಸಾಧನೆಗಳಾಗಿಯೂ ಇರುವುದರಿಂದ ಕಶೇರು ಸ್ತಂಭ ಸೂಕ್ತವಾಗಿ ಮಾರ್ಪಟ್ಟಿವೆ. ಪಕ್ಕೆಲುಬುಗಳು ಹೇರಳವಾಗಿವೆ. ಇಲಿಯಂ ಮೂಳೆಗಳು ಅಗಲವಾಗಿವೆ ನೇರವಾಗಿವೆ. ಮೇಲೆಕ್ಕೆದ್ದಿರುವಂತೆ ಇದ್ದು ಚಲನೆಗೆ ಅಗತ್ಯವಾದ ಸ್ನಾಯುಗಳಾದ ಗ್ಲೂಟೈಗಳು ಮತ್ತು ಹೊಟ್ಟೆಯ ಭಾರವನ್ನು ಹೊರುವ ಸ್ನಾಯುಗಳು ಇದಕ್ಕೆ ಅಂಟಿ ಕೊಳ್ಳಲು ಅನುಕೂಲವಾಗಿದೆ. 

ಗೊರಸಿಗಳ ಕತ್ತು ಉದ್ದವಾಗಿರುತ್ತವೆ. ಪ್ರಾಣಿ ತನ್ನ ಸುತ್ತಮುತ್ತ ದೃಷ್ಟಿ ಹಾಯಿಸುವುದಕ್ಕೆ ಆಹಾರವನ್ನು ಎಟಿಕಿಸಿಕೊಳ್ಳಲು ತಲೆಯನ್ನು ಚಾಚುವುದಕ್ಕೆ ಇದರಿಂದ ಅನುಕೂಲ. ಸಾಮಾನ್ಯವಾಗಿ ಗೊರಸಿಗಳು ಶ್ರವಣಶಕ್ತಿ ಬಹು ಚುರುಕು. ಕಿವಿಗಳು ಬಲು ಉದ್ದವಾಗಿದ್ದು ಶಬ್ದ ಬರುವ ದಿಕ್ಕನ್ನು ಗ್ರಹಿಸಲು ಸಹಾಯಕವಾಗಿವೆ. ಪ್ರಾಣ ಶಕ್ತಿಯೂ ಹೆಚ್ಚಾಗಿವೆ. ಸಾಮಾನ್ಯವಾಗಿ ಗೊರಸಿಗಳು ಹುಲ್ಲು ಮೇಯುವಾಗ ಗಾಳಿಗೆ ಎದುರಾಗಿಯೇ ಸಾಗುತ್ತವೆ. ಮೂತಿ ಸದಾ ಒದ್ದೆಯಾಗಿದ್ದು ಅದರಲ್ಲಿರುವ ಗ್ರಾಹಕಗಳು ಗಾಳಿಗುಂಟ ಬರುವ ವಾಸನೆಯನ್ನು ಗ್ರಹಿಸಲು ಸಮರ್ಥವಾಗಿವೆ. ಅಂತಯೇ ನಾಲಿಗೆ ದೊಡ್ಡ ಗಾತ್ರವಾಗಿದ್ದು ಸೂಕ್ಷ್ಮವೇದಿಗಳಾಗಿವೆ. ರಸನೇಂದ್ರಿಯಗಳನ್ನು ಪಡೆದಿದೆ. ಮಿದುಳು ದೊಡ್ಡ ಗಾತ್ರದ್ದು.

ಗೊರಸಿಗಳಲ್ಲಿ ಬಹುಪಾಲು ಬಗೆಯವು ಸಮಾಜಜೀವಿಗಳು. ಗುಂಪುಗುಂಪಾಗಿರುವುದರಿಂದ ಒಂದು ಪ್ರಾಣಿಯ ಅನುಭವವನನ್ನು ಗಮನಿಸಿ ಆ ಗುಂಪಿನ ಇತರ ಪ್ರಾಣಿಗಳು ಸುಲಭವಾಗಿ ಪಾಠ ಕಲಿಯುತ್ತವೆ. ಗೊರಸಿಗಳ ಇನ್ನೊಂದು ಮುಖ್ಯ ¯ಕ್ಷಣ ವಾಸನಾಗ್ರಂಥಗಳು. ಇವುಗಳಲ್ಲಿ ಉತ್ಪತ್ತಿಯಾಗುವ ವಾಸನೆಯನ್ನು ಗೊರಸಿಗಳು ತಮ್ಮ ನಡೆಜಾಡುಗಳನ್ನು ಮತ್ತು ಆಧೀನ ಪ್ರಾಂತ್ಯಗಳನ್ನು ಗುರುತಿಸಿಕೊಂಡು ತಮ್ಮ ನಡುವಿನ ಸಂಜ್ಞೆಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕೂ ಉಪಯೋಗಿಸಿಕೊಳ್ಳುತ್ತವೆ. ಗೊರಸಿಗಳ ಲೈಂಗಿಕ ವ್ಯವಸ್ಥೆ ಸಂಕೀರ್ಣವಾಗಿದ್ದು ಇದು ದೃಷ್ಟಿ, ಶ್ರವಣ ಘ್ರಾಣ ಸಂಬಂಧಿ ಸಂಜ್ಞೆಗಳ ವಿವರವಾದ ಬಳಕೆಯನ್ನು ಒಳಗೊಂಡಿದ್ದು ಕೆಲವು ಸಾರಿ ಗಂಡುಗಳ ನಡುವೆ ಕಾದಟ ನಡೆಯುವ ಪರಿಪಾಠ ಉಂಟು. ಗರ್ಭಾವಸ್ಥೆ ಅವಧಿ ದೀರ್ಘವಾಗಿದ್ದು ಅಲ್ಲದೆ ಸಮರ್ಥವಾದ ಮಿದಿಳುಳ್ಳ ಇತರ ದೊಡ್ಡ ಗಾತ್ರದ ಪ್ರಾಣಿಗಳಲ್ಲಿರುವಂತೆ ಹುಟ್ಟುವ ಮರಿಗಳ ಸಂಖ್ಯೆ ಕಡಿಮೆ. ಹೊಸದಾಗಿ ಹುಟ್ಟಿದ ಮರಿ ಚೆನ್ನಾಗಿ ಬೆಳೆದಿರುತ್ತದಲ್ಲದೆ ಬೇಗ ಹೆಣ್ಣಿನೊಡನೆ ಸ್ವತಂತ್ರವಾಗಿ ಓಡಾಡುವ ಸಾಮಥ್ರ್ಯವನ್ನು ಪಡೆಯುತ್ತವೆ. 

ಗೊರಸಿಗಳು ಆಹಾರವನ್ನು ಪಡೆಯುವ ಮತ್ತು ಅರಗಿಸಿಕೊಳ್ಳುವ ವಿಧಾನದಲ್ಲಿ ಬಹುಶಃ ಮೇಲೆ ಹೇಳಿದ ಲಕ್ಷಣಗಳಿಗಿಂತ ಹೆಚ್ಚು ಗಮನಾರ್ಹವಾದ ಮಾರ್ಪಾಡುಗಳನ್ನು ಕಾಣಬಹುದು. ಇವುಗಳ ಪುರ್ವಜರಾದ ಕೀಟ ಭಕ್ಷಗಳಲ್ಲಿದ್ದ ದವಡೆ ಹಲ್ಲಿನ ತ್ರಿಕೋನಾಕಾರದ ವಿನ್ಯಾಸ ಇವುಗಳಲ್ಲಿ ಚಚ್ಚೌಕÀ ಮಾದರಿಯಾಗಿದೆ. ಹಲ್ಲುಗಳು ಕೋಡು ಕೆಲವು ಬದಲಾವಣೆಗಳಿಗೊಳಗಾಗಿ ಚೂಪು ಮೊನೆಯಂತಿರುವ ಹಲವಾರು ಏಣುಗಳುಳ್ಳ ಲೋಪೋಡಾಂಟ್ ಮಾದರಿಯ ಮೇಲ್ಮೈಯಾಗಿ ರೂಪುಗೊಂಡಿವೆ. ಮಿಗಿಲಾಗಿ ಇಡೀ ಹಲ್ಲೇ ಸಿಮೇಂಟಿನಿಂದ (ಮೂಳೆ) ಆವೃತವಾಗುತ್ತದೆ. ಬೇಗ ಸವೆಯಬಹುದಾದ ಮೋಟು ಬಗೆಯ ದವಡೆ ಹಲ್ಲುಗಳ (ಬ್ರಾಕಿಡಾಂಟ್) ಬದಲಾಗಿ ಉದ್ದವಾದ ಹೈಪೋಸೋಡಾಂಟ್ ಬಗೆ ಹಲ್ಲುಗಳು ಕಾಣಿಸಿಕೊಳ್ಳುತ್ತವೆ. ಈ ಪ್ರಾಣಿಗಳಲ್ಲಿ ಆಹಾರವನ್ನು ಅರೆಯುವ ಅವಶ್ಯಕತೆ ಹೆಚ್ಚಾಗಿರುವುದರಿಂದ ಸಾಮಾನ್ಯವಾಗಿ ಇಡೀ ದಂತಶ್ರೇಣಿ ಹಾಗೆಯೇ ಬಹುಕಾಲ ಉಳಿಯುವುದಲ್ಲದೆ ದವಡೆಹಲ್ಲುಗಳೂ ಮುಂದವಡೆ ಹಲ್ಲುಗಳೂ ಆಹಾರವನ್ನು ಅರೆಯಲು ಅನುಕೂಲವಾಗುವಂತೆ ಚಪ್ಪಟೆಯಾಗಿವೆ. ಈ ಲಕ್ಷಣದಲ್ಲಿ ಗೊರಸಿಗಳು ಮಾಂಸಾಹಾರಿಗಳಾದ ಕಾರ್ನಿವೋರ ಗಣದ ಪ್ರಾಣಿಗಳಿಂದ ಭಿನ್ನವೆನಿಸಿವೆ. ಗೊರಸಿಗಳ ಬಾಚಿಹಲ್ಲುಗಳು ಹುಲ್ಲು, ಚಿಗುರು ಮುಂತಾದ ಸಸ್ಯಾಹಾರವನ್ನು ತುಂಡರಿಸಲು ಸಹಾಯಕವಾಗಿವೆ. ಕೆಲವೊಮ್ಮೆ (ಉದಾಹರಣೆಗೆ ಆರ್ಟಿಯೋಡ್ಯಾಕ್ಟಿಲ ಲಗಣದ ಗೊರಸಿಗಳು ) ಮೇಲ್ದವಡೆಯಲ್ಲಿನ ಬಾಚಿಹಲ್ಲುಗಳ ಸಾಲು ಅಳಿದು ಹೋಗಿರುತ್ತವೆ. ಇಂಥವುಗಳಲ್ಲಿ ಕೆಳದವಡೆಯ ಬಾಚಿಹಲ್ಲುಗಳು ಮತ್ತು ಕೊಂಬಿನಂತೆ ಇರುವ ಮೇಲ್ದುಟಿಗಳೇ ಆಹಾರವನ್ನು ಕತ್ತರಿಸಲು ಸಹಾಯಕವಾಗಿವೆ. ಅನೇಕ ಸಲ ಕೋರೆಹಲ್ಲು ಕಾಣೆಯಾಗಿರುತ್ತದೆ. ಆಹಾರವನ್ನು ತುಂಡರಿಸುವ ಮತ್ತು ಅರೆಯುವ ಕಾರ್ಯ ತುಟಿ, ತಾಲು. ನಾಲಿಗೆ ಮತ್ತು ದವಡೆಗಳು ಹಾಗೂ ಅವುಗಳ ಸ್ನಾಯುಗಳ ಹಲವಾರು ಮಾರ್ಪಾಟುಗಳಿಗೆ ಕಾರಣವಾಗಿದೆ. ದವಡೆ ತಲೆಬುರುಡೆಯೊಂದಿಗೆ ಚಪ್ಪಟೆ ಫಲಕದ ರೀತಿ ಕೀಲಿಸಿ ಕೊಂಡಿರುವುದರಿಂದ ಕೆಳದವಡೆ ಆವರ್ತಚಲನೆಯನ್ನು ತೋರುತ್ತದೆ. ಗೊರಸಿಗಳ ತಲೆಬುರುಡೆಯಲ್ಲಿ ಹಣೆಯ ಏಣು ಇಲ್ಲದಿರುವುದರಿಂದ ಅದು ಚಪ್ಪಟೆಯಾಗಿದೆ. 

ಗೊರಸಿಗಳು ಸೇವಿಸುವ ಆಹಾರದಲ್ಲಿನ ಸೆಲ್ಯುಲೋಸಿನ ಪಚನಕ್ರಿಯೆಯಲ್ಲಿ ಸಹಾಯ ಮಾಡುವ ಬ್ಯಾಕ್ಟೀರಿಯಗಳಿಗಾಗಿ ಗೊರಸಿಗಳ ಜೀರ್ಣಾಗವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಒಂದು ಪ್ರತ್ಯೇಕ ಕೋಣೆಯಿರುತ್ತದೆ. ಈ ಕೋಣೆ ಆರ್ಟಿಯೋ ಡ್ಯಾಕ್ಟಿಲ ಪ್ರಾಣಿಗಳಲ್ಲಿ ಜಠರದಲ್ಲಿದ್ದರೆ ಪೆರಿಸೋಡ್ಯಾಕ್ಟಿ¯ ಪ್ರಾಣಿಗಳಲ್ಲಿ ಸೀಕಂ ಭಾಗದಲ್ಲಿದೆ. 

ಹೀಗೆ ಮೇಲೆ ವಿವರಿಸಿದ ಲಕ್ಷಣಗಳು ಗೊರಸಿಗಳಿಗೆ ಮಾತ್ರ ವಿಶಿಷ್ಟವಾಗಿದ್ದು ಎಲ್ಲವೂ ಆ ಪ್ರಾಣಿಗಳ ಸಸ್ಯಾಹಾರ ಜೀವನಕ್ಕೆ ಪೂರಕವಾಗಿವೆ. 

ವರ್ಗೀಕರಣ: ಗೊರಸಿಗಳ ಗುಂಪನ್ನು ಪ್ರೋಟೋಅಂಗ್ಯುಲೇಟ, ಪೀನಂಗ್ಯುಲೇಟ, ಮೀಸಾಕ್ಸೋನಿಯ ಮತ್ತು ಪ್ರಾರಾಕ್ಸೋನಿಯ ಎಂಬ 4 ಅಧಿಗಣಗಳಾಗಿ ವಿಂಗಡಿಸಲಾಗಿದೆ: ಪ್ರೋಟೋಅಂಗ್ಯುಲೇಟದಲ್ಲಿ ಕಾಂಡಿಲಾತ್ರ್ರ, ನೋಟೋಅಂಗ್ಯುಲೇಟ, ಲಿಟಾಪ್ಟರ್ನ, ಆಸ್ಟ್ರಪೊರೀರಿಯ ಮತ್ತು ಟ್ಯೂಬ್ಯುಲಿ ಡೆಂಟೇಟ ಎಂಬ 5 ಗಣಗಳಿವೆ.  ಪೀನಂಗ್ಯುಲೇಟ ಅಧಿಗಣ ಹೈರಕಾಯ್ಡಿಯ, ಪ್ರೊಬಾಸಿಡಿಯ, ಪ್ಯಾಂಟೊಡಾಂಟ, ಡೈನೋಸೆರೇಟ, ಪೈರೊರೀರಿಯ, ಎಂಬ್ರಿತಾ ಪೊಡ ಮತ್ತು ಸೈರೀನಿಯ ಎಂಬ 7 ಗಣಗಳನ್ನು ಒಳಗೊಂಡಿದೆ. ಪೆರಿಸೋಡ್ಯಾಕ್ಟಿಲ ಎಂಬ ಗಣ ಮೀಸಾಕ್ಸೋನಿಯ ಅಧಿಗಣಕ್ಕೂ ಆರ್ಡಿಯೊಡ್ಯಾಕ್ಟಿಲ ಎಂಬ ಗಣ ಪ್ಯಾರಾಕ್ಸೋನಿಯ ಅಧಿಗಣಕ್ಕೂ ಸೇರಿವೆ.
(ಎಸ್.ಬಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ